Imran Khan | ಅಸ್ಥಿರ ಮನಸ್ಸಿನ ಡಿಕ್ಟೇಟರ್; ಅಸೀಮ್ ಮುನೀರ್ ವಿನಾಶಕಾರಿ ನೀತಿಗಳಿಂದ ಸಂವಿಧಾನ ಧ್ವಂಸ: ಇಮ್ರಾನ್ ಖಾನ್ ವಾಗ್ದಾಳಿ
Imran Khan | ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್
Published on:
Copied
Follow Us
ಇಸ್ಲಾಮಾಬಾದ್; ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮಾನಸಿಕವಾಗಿ ಅಸ್ಥಿರ ವ್ಯಕ್ತಿ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಆರೋಪಿಸಿದ್ದಾರೆ. ಅಲ್ಲದೆ, ಪಾಕ್ನಲ್ಲಿ ಭಯೋತ್ಪಾದನೆ ಮತ್ತು ಅಫ್ಘಾನ್ ಉದ್ವಿಗ್ನತೆ ಹೆಚ್ಚಾಗಲು ಇವರ ನೀತಿಗಳೇ ಕಾರಣ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಪ್ರಧಾನಿ ಖಾನ್, ಅಸಿಮ್ ಮುನೀರ್ ನೀತಿಗಳು ಪಾಕಿಸ್ತಾನಕ್ಕೆ ಹಾನಿಕಾರಕವಾಗಿವೆ. ಅಲ್ಲದೆ, ಇವರ ನೀತಿಗಳಿಂದಾಗಿ, ಭಯೋತ್ಪಾದನೆ ನಿಯಂತ್ರಣ ತಪ್ಪಿದೆ, ಅದು ನನಗೆ ತುಂಬಾ ದುಃಖವನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ಆಸಿಮ್ ಮುನೀರ್ ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಯಾವುದೇ ಕಾಳಜಿಯನ್ನು ಹೊಂದಿಲ್ಲ. ಅಲ್ಲದೆ, ಪಾಶ್ಚಿಮಾತ್ಯ ಶಕ್ತಿಗಳನ್ನು ಮೆಚ್ಚಿಸಲು ಮಾತ್ರ ಅವನು ಇದನ್ನೆಲ್ಲಾ ಮಾಡುತ್ತಿದ್ದಾನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಇಸ್ಲಾಮಿಕ್ ಹೋರಾಟಗಾರ ಎಂದು ಕರೆಯಿಸಿಕೊಳ್ಳಲು ಆಸಿಮ್ ಉದ್ದೇಶಪೂರ್ವಕವಾಗಿ ಅಫ್ಘಾನಿಸ್ತಾನದೊಂದಿಗೆ ಉದ್ವಿಗ್ನತೆಯನ್ನು ಹುಟ್ಟುಹಾಕಿದನ್ನೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು ಮಾತನಾಡಿದ ಖಾನ್, ದೇಶದಲ್ಲಿ ಸ್ವಂತ ಜನರ ವಿರುದ್ಧ ಡ್ರೋನ್ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ವಿರೋಧಿದ್ದಾರೆ. ಈ ಘಟನೆಗಳು ಹೆಚ್ಚಿನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮುನಿರ್ ಮೊದಲು ಆಫ್ಘನ್ನರಿಗೆ ಬೆದರಿಕೆ ಹಾಕಿದರು. ನಂತರ ಪಾಕಿಸ್ತಾನದಿಂದ ನಿರಾಶ್ರಿತರನ್ನು ಹೊರಹಾಕಿದ್ದಾರೆ. ಇದರ ಪರಿಣಾಮಗಳನ್ನು ನಾವು ಈಗ ಹೆಚ್ಚುತ್ತಿರುವ ಭಯೋತ್ಪಾದನೆಯ ರೂಪದಲ್ಲಿ ಎದುರಿಸುತ್ತಿದ್ದೇವೆ ಎಂದು ಖಾನ್ ಹೇಳಿದ್ದಾರೆ.
ಮುನೀರ್ ಮಾನಸಿಕವಾಗಿ ಅಸ್ಥಿರ ವ್ಯಕ್ತಿ ಎಂದು ಕರೆದ ಖಾನ್, ನೈತಿಕ ದಿವಾಳಿತನವು ಪಾಕಿಸ್ತಾನದಲ್ಲಿ ಸಂವಿಧಾನ ಮತ್ತು ಕಾನೂನಿನ ನಿಯಮದ ಸಂಪೂರ್ಣ ಕುಸಿತಕ್ಕೆ ಕಾರಣವಾಗಿದೆ.
ಮುನೀರ್ ಆದೇಶದ ಮೇರೆಗೆ, ಇಮ್ರಾನ್ ಪತ್ನಿಯನ್ನು ಬಂಧಿಸಲಾಗಿದೆ. ಅಲ್ಲದೆ, ಅತ್ಯಂತ ಕೆಟ್ಟ ರೀತಿಯ ಮಾನಸಿಕ ಹಿಂಸೆಗೆ ಒಳಪಡಿಸಲಾಗಿದೆ. ನನ್ನನ್ನು ಸಂಪೂರ್ಣ ಏಕಾಂತ ಬಂಧನದಲ್ಲಿ ಇರಿಸಲಾಗಿದೆ. ಅಲ್ಲದೆ, ನಾಲ್ಕು ವಾರಗಳ ಕಾಲ ಒಬ್ಬ ಮನುಷ್ಯನ ಸಂಪರ್ಕಕ್ಕೂ ಸಿಗದಂತೆ ಸೆಲ್ನೊಳಗೆ ಬಂಧಿಸಲಾಗಿದೆ. ಹೊರಗಿನ ಪ್ರಪಂಚದಿಂದ ನನ್ನನ್ನು ಸಂಪೂರ್ಣವಾಗಿ ದೂರವಿಡಲಾಗಿದೆ ಮತ್ತು ಜೈಲು ಕೈಪಿಡಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಅವಶ್ಯಕತೆಗಳನ್ನು ಸಹ ನಮ್ಮಿಂದ ಕಸಿದುಕೊಳ್ಳಲಾಗಿದೆ ಎಂದು ಇಮ್ರಾನ್ ತಿಳಿಸಿದರು.
ಆಗಸ್ಟ್ 2023 ರಿಂದ ಹಲವಾರು ಪ್ರಕರಣಗಳಲ್ಲಿ ಜೈಲಿನಲ್ಲಿರುವ ಖಾನ್ ಅವರನ್ನು ಭೇಟಿಯಾಗದಂತೆ ಅಘೋಷಿತ ನಿಷೇಧ ಹೇರಲಾಯಿತು, ಇದು ಅವರ ಆರೋಗ್ಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು,(ಏಜೆನ್ಸೀಸ್).